Index   ವಚನ - 90    Search  
 
ಜಾತಿ ಧರ್ಮ ನೀತಿಯ ಬಿಟ್ಟು ವಿಜಾತಿಗಳ ಎಂಜಲುತಿಂಬ ಪಾಪಕರ್ಮಿಗಳಾದಡಾಗಲಿ, ಸರ್ವಪಾಪವ ಬಿಟ್ಟಾತನಾದಡಾಗಲಿ, ರುದ್ರಾಕ್ಷಿಮಾಲೆಯ ಕೊರಳಲ್ಲಿ ಧರಿಸಿದರೆ ಪರಮಪವಿತ್ರನೆನಿಸಿ ಹರನ ಕೈಲಾಸದಲ್ಲಿಪ್ಪನು ನೋಡಾ. ಅದೆಂತೆಂದೊಡೆ: ಸ್ಕಂದಪುರಾಣೇ- ರುದ್ರಾಕ್ಷಮಾಲಿಕಾಂ ಕಂಠೇ ಧಾರಯೇತ್ ಭಕ್ತಿವರ್ಧಿತಃ | ಪಾಪಕರ್ಮಾಪಿ ಯೋ ಮರ್ತ್ಯೋ ರುದ್ರಲೋಕೇ ಮಹೀಯತೇ || ಸೋಚ್ಛಿಷ್ಟೋ ವಾಪಿ ಕರ್ಮಸ್ಥೋ ಯುಕ್ತೋ ವಾ ಸರ್ವಪಾತಕೈಃ | ಮುಚ್ಯತೇ ಸರ್ವಪಾಪೇಭ್ಯೋ ನರೋ ರುದ್ರಾಕ್ಷಧಾರಣಾತ್ ||'' ಎಂದುದಾಗಿ, ಇಂತಪ್ಪ ರುದ್ರಾಕ್ಷಿಯು ನೀನೆ ಅಯ್ಯ ಅಖಂಡೇಶ್ವರಾ.