Index   ವಚನ - 96    Search  
 
ಏಳುಕೋಟಿ ಮಹಾಮಂತ್ರಗಳ ಉಪಮಂತ್ರ ಕೋಟ್ಯಾನುಕೋಟಿಗಳ ಕಲಿತು ತೊಳಲಿ ಬಳಲುವುದೇಕೋ? ಭಾಳಾಕ್ಷನ ಮೂಲಮಂತ್ರ ಒಂದೇ ಸಾಲದೇ! ಸಕಲವೇದಂಗಳ ಮೂಲವಿದು, ಸಕಲಶಾಸ್ತ್ರಂಗಳ ಸಾರವಿದು, ಸಕಲಾಗಮಂಗಳ ಅರುಹಿದು, ಸಕಲಮಂತ್ರಂಗಳ ಮಾತೆಯಿದು. ಇಂತಪ್ಪ ಶಿವಮಂತ್ರವೆಂಬ ಸಂಜೀವನವು ಎನ್ನಂಗಕ್ಕೆ ಸಂಗಿಸಲಾಗಿ ಎನಗೆ ಮರಣದ ಭಯ ಹಿಂಗಿತಯ್ಯಾ ಅಖಂಡೇಶ್ವರಾ!