Index   ವಚನ - 95    Search  
 
ಆವನೊಬ್ಬನ ಹೃದಯದಲ್ಲಿ 'ಓಂ ನಮಃ ಶಿವಾಯ' ಎಂಬ ಮಂತ್ರವು ನಿಶ್ಚಲವಾಗಿರಲು ಆತಂಗೆ ಸಕಲಮಂತ್ರಂಗಳ ಸಕಲತಂತ್ರಂಗಳ ಹಂಗಿಲ್ಲ: ಆತಂಗೆ ಸಕಲಶಾಸ್ತ್ರಂಗಳ ಸಕಲವಿದ್ಯಂಗಳ ಅಭ್ಯಸಿಸಬೇಕೆಂಬ ಭ್ರಾಮಕವಿಲ್ಲ. ಆತನಿರ್ದಲ್ಲಿ ಸಕಲಭುವನ ಸಕಲತತ್ತ್ವಂಗಳಿರ್ಪುವು. ಆತ ನಿರಾವರಣ ನಿರುಪಮ ನಿರಾಲಂಬ ನಿಜಮುಕ್ತನು ನೋಡಾ ಅಖಂಡೇಶ್ವರಾ!