Index   ವಚನ - 110    Search  
 
ಶಿವಶಿವಾ! ಶಿವಭಕ್ತನಿರ್ದ ಹಳ್ಳಿಯಾದಡಾಗಲಿ, ಪಟ್ಟಣವಾದಡಾಗಲಿ ಹೊರಗೇರಿಯಾದಡಾಗಲಿ, ಶ್ರೇಷ್ಠಭೂಮಿಯಾದಡಾಗಲಿ ಕನಿಷ್ಠಭೂಮಿಯಾದಡಾಗಲಿ, ಆತನಿರ್ದ ಸ್ಥಾನವೇ ಶಿವಲೋಕವೆನಿಸಿತ್ತು. ಆತನಿರ್ದ ಮನೆಯೇ ಶಿವಮಂದಿರವೆನಿಸಿತ್ತು. ಆತನಿರ್ದ ದೇಶಕ್ಕೆ ಹಸಿವು ತೃಷೆ ದುರ್ಭಿಕ್ಷವಿಲ್ಲ. ಆಧಿ ವ್ಯಾಧಿ ರೋಗ ರುಜೆ ವಿಪತ್ತುಗಳಿಲ್ಲ ನೋಡಾ! ಅದೆಂತೆಂದೊಡೆ: ಲಿಂಗಪುರಾಣೇ- ರುದ್ರಾಧ್ಯಾಯೀ ವಸೇದ್ಯಸ್ತು ಗ್ರಾಮೇ ವಾ ನಗರೇsಪಿ ವಾ | ನ ತತ್ರ ಕ್ಷುತ್ ಪಿಪಾಸಾದ್ಯಾ ದುರ್ಭಿಕ್ಷಂ ವ್ಯಾಧಯೋsಪಿ ವಾ ||'' ಮತ್ತಂ, ಚಾಂಡಾಲವಾಟಿಕಾಯಾಂ ಶಿವಭಕ್ತಃ ಸ್ಥಿತೋ ಯದಿ | ತದ್ಭೂಮಿಃ ಶಿವಲೋಕಸ್ತು ತದ್ಗೃಹಂ ಶಿವಮಂದಿರಮ್ ||'' ಎಂದುದಾಗಿ, ಇಂತಪ್ಪ ಪರಮಶಿವಭಕ್ತನ ದರ್ಶನವು ಪುಣ್ಯದಪುಂಜವು ನೋಡಾ ಅಖಂಡೇಶ್ವರಾ.