Index   ವಚನ - 109    Search  
 
ಅಕುಲಜ ಅಧಮ ಮೂರ್ಖನಾದಡಾಗಲಿ ಮುಕ್ಕಣ್ಣ ಹರನ ಭಕ್ತಿಯ ಹಿಡಿದಾತನು ಸಿಕ್ಕಬಲ್ಲನೇ ಯಮನಬಾಧೆಗೆ? ಆತನು ದೇವ ದಾನವ ಮಾನವರೊಳಗೆ ಪೂಜ್ಯನು ನೋಡಾ! ಅದೆಂತೆಂದೊಡೆ: ಶಿವಧರ್ಮೇ- ``ಅಂತ್ಯಜೋ ವಾಧಮೋ ವಾಪಿ ಮೂರ್ಖೋ ವಾ ಪಂಡಿತೋಪಿ ವಾ | ಶಿವಭಾವಂ ಪ್ರಪನ್ನಶ್ಚೇತ್ ಪೂಜ್ಯಸ್ಸರ್ವೈ ಸ್ಸುರಾಸುರೈಃ ||'' ಎಂದುದಾಗಿ, ಶಿವಭಕ್ತನೇ ಶ್ರೇಷ್ಠನು ನೋಡಾ ಅಖಂಡೇಶ್ವರಾ.