ಸದ್ಭಕ್ತನಾದಾತನು ಸತ್ಪಾತ್ರದಾನಯುಕ್ತನಾಗಿರಬೇಕಲ್ಲದೆ
ಅಪಾತ್ರದಾನವ ಮಾಡಲಾಗದು ನೋಡಾ.
ಅಪಾತ್ರವೆಂದೊಡೆ: ನಾಲ್ಕು ವೇದವನೋದಿನ ಬ್ರಾಹ್ಮಣನಾದಡಾಗಲಿ,
ಶಿವಭಕ್ತಿಯಿಲ್ಲದವಂಗೆ ಗೋದಾನ ಭೂದಾನ ಸುವರ್ಣದಾನ
ಕನ್ನಿಕಾದಾನಂಗಳ ಕೊಟ್ಟರೆ ಮುಂದೆ ನರಕ ತಪ್ಪದು ನೋಡಾ.
ಅದೆಂತೆಂದೊಡೆ: ಲಿಂಗಪುರಾಣೇ-
ಚತುರ್ವೇದಧರೋ ವಿಪ್ರಃ ಶಿವಭಕ್ತಿವಿವರ್ಜಿತಃ |
ತಸ್ಮೈ ಕಾಂಚನದಾನೇನ ದಾತಾರು ನರಕಂ ವ್ರಜೇತ್ ||''
ಎಂದುದಾಗಿ, ಅಪಾತ್ರದಾನ ನಾಯಕನರಕ
ನೋಡಾ ಅಖಂಡೇಶ್ವರಾ
Art
Manuscript
Music
Courtesy:
Transliteration
Sadbhaktanādātanu satpātradānayuktanāgirabēkallade
apātradānava māḍalāgadu nōḍā.
Apātravendoḍe: Nālku vēdavanōdina brāhmaṇanādaḍāgali,
śivabhaktiyilladavaṅge gōdāna bhūdāna suvarṇadāna
kannikādānaṅgaḷa koṭṭare munde naraka tappadu nōḍā.
Adentendoḍe: Liṅgapurāṇē-
caturvēdadharō vipraḥ śivabhaktivivarjitaḥ |
tasmai kān̄canadānēna dātāru narakaṁ vrajēt ||''
endudāgi, apātradāna nāyakanaraka
nōḍā akhaṇḍēśvarā