Index   ವಚನ - 113    Search  
 
ಬ್ರಾಹ್ಮಣನ ದರ್ಶನ ಪಾಪದ ಪುಂಜ ನೋಡಾ. ಬ್ರಾಹ್ಮಣನಿಗೆ ಕೊಟ್ಟದಾನ ಅಪಾತ್ರ ದೋಷದಾರಿದ್ರ್ಯತೆ ನೋಡಾ. ಶಿವಭಕ್ತಿಯಿಲ್ಲದ ಬ್ರಾಹ್ಮಣನಿಗೆ ವಂದನೆಯ ಮಾಡಿದರೆ ಮುಂದೆ ಶುನಿ ಶೂಕರ ಬಸಿರಲ್ಲಿ ಬಪ್ಪುದು ತಪ್ಪದು ನೋಡಾ. ಅಂದೆಂತೆಂದೊಡೆ: ಶಿವಭಕ್ತಿವಿಹೀನಸ್ಯ ಬ್ರಾಹ್ಮಣಸ್ಯ ತು ದರ್ಶನಮ್ | ಕೃತ್ವಾ ತು ಮಾನವೋ ಯಾತಿ ಕೀಟಜನ್ಮ ಪದೇ ಪದೇ ||'' ಎಂದುದಾಗಿ, ಇಂತಪ್ಪ ಹರಿಕುಲದ ಹಾರುವರ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.