Index   ವಚನ - 135    Search  
 
ಸರ್ವಲೋಕೋಪಕಾರವಾಗಿ ಶಿವನೇ ಜಂಗಮವಾಗಿ ಬಂದನೆಂದರಿಯದವನ ಮುಖವ ನೋಡಲಾಗದು. ಸರ್ವಲೋಕ ಪಾವನ ಮಾಡಲೋಸುಗ ಶಿವನೇ ಜಂಗಮವಾಗಿ ಬಂದನೆಂದು ನಂಬದವನ ಅಂಗಳವ ಮೆಟ್ಟಲಾಗದು. ಅದೆಂತೆಂದೊಡೆ: ಸರ್ವಲೋಕೋಪಕಾರಾಯ ಯೋ ದೇವಃ ಪರಮೇಶ್ವರಃ | ಚರತ್ಯತಿಥಿರೂಪೇಣ ನಮಸ್ತೇ ಜಂಗಮಾತ್ಮನೇ ||'' ಎಂದುದಾಗಿ, ಇಂತಪ್ಪ ಜಂಗಮದ ಘನವರಿಯದ ಭಂಗಗೇಡಿಗಳ ಭಕ್ತರೆಂದಡೆ ಭವಹಿಂಗದಯ್ಯ ಅಖಂಡೇಶ್ವರಾ.