Index   ವಚನ - 136    Search  
 
ಮನೆಗೆ ಬಂದ ಜಂಗಮವ ಕಂಡು ಮನದಲ್ಲಿ ಉದಾಸೀನವ ತಾಳಿ ಮೋರೆಯನಡ್ಡನಿಕ್ಕಿದರೆ ಜಾರಿಹೋಯಿತ್ತು ನೋಡಾ ಹಿಂದೆ ಮಾಡಿದ ಭಕ್ತಿ. ಪಂಕ್ತಿಯಲ್ಲಿ ಕುಳಿತ ಜಂಗಮಕ್ಕೆ ಒಂದ ನೀಡಿ ತಾನೊಂದನುಂಡರೆ ಹುಳುಗೊಂಡದಲ್ಲಿಕ್ಕುವ ನೋಡಾ ನಮ್ಮ ಅಖಂಡೇಶ್ವರ.