Index   ವಚನ - 146    Search  
 
ಲಿಂಗಪ್ರೇಮವುಳ್ಳವಂಗೆ ಭವಬಂಧನವಿಲ್ಲ; ಜಂಗಮಪ್ರೇಮವುಳ್ಳವಂಗೆ ಸಂಸಾರದ ತೊಡಕಿಲ್ಲ. ಪ್ರಸಾದಪ್ರೇಮವುಳ್ಳವಂಗೆ ಇಹಪರದ ಎಡೆಯಾಟವಿಲ್ಲ. ತಾನಿಲ್ಲದೆ ಮಾಡುವ ಭಕ್ತಂಗೆ ಆವಾವ ಫಲಪದದ ಹಂಗಿಲ್ಲವಯ್ಯ ಅಖಂಡೇಶ್ವರಾ.