Index   ವಚನ - 145    Search  
 
ಕಾಮವುಳ್ಳಂಗೆ ಲಿಂಗದಪ್ರೇಮವಿನ್ನೆಲ್ಲಿಯದೊ? ಕ್ರೋಧವುಳ್ಳವಂಗೆ ಜಂಗಮದಪ್ರೇಮವಿನ್ನೆಲ್ಲಿಯದೊ? ಮದಮತ್ಸರವುಳ್ಳವಂಗೆ ಪ್ರಸಾದದಪ್ರೇಮವಿನ್ನೆಲ್ಲಿಯದೊ? ಇಂತೀ ಗುಣವರತಲ್ಲದೆ ಸಹಜಭಕ್ತಿ ನೆಲೆಗೊಳ್ಳದಯ್ಯ ಅಖಂಡೇಶ್ವರಾ.