ಪರಸ್ತ್ರೀಯರ ಮುಟ್ಟದಿರಬೇಕು. ಪರಧನವನಪಹರಿಸದಿರಬೇಕು.
ಪರದೈವವ ಪೂಜಿಸದಿರಬೇಕು. ಪರಹಿಂಸೆಯ ಮಾಡದಿರಬೇಕು.
ಪರಲೋಕದ ಫಲಪದವ ಬಯಸದಿರಬೇಕು.
ಮನವು ನಿರ್ವಯಲಾಗಿ ಇಷ್ಟಲಿಂಗದಲ್ಲಿ ನಿಷ್ಠೆ ಬಲಿದಿರಬೇಕು.
ಕಷ್ಟಜನ್ಮಂಗಳ ಕಡೆಗೊಡ್ಡಿರ್ಪಾತನೇ ವೀರಮಾಹೇಶ್ವರನು ನೋಡಾ.
ಅದೆಂತೆಂದೊಡೆ:
ಪರಸ್ತ್ರೀಯಂ ಪರಾರ್ಥಂ ಚ ವರ್ಜಯೇತ್ ಭಾವಶುದ್ಧಿಮಾನ್ |
ಲಿಂಗನಿಷ್ಠಾನಿಯುಕ್ತಾತ್ಮಾ ಮಾಹೇಶ್ವರಮಹಾಸ್ಥಲಂ ||''
ಎಂದುದಾಗಿ, ಇಂತಪ್ಪ ಪರಮ ಮಾಹೇಶ್ವರನ ಶ್ರೀಪಾದಕ್ಕೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
Art
Manuscript
Music
Courtesy:
Transliteration
Parastrīyara muṭṭadirabēku. Paradhanavanapaharisadirabēku.
Paradaivava pūjisadirabēku. Parahinseya māḍadirabēku.
Paralōkada phalapadava bayasadirabēku.
Manavu nirvayalāgi iṣṭaliṅgadalli niṣṭhe balidirabēku.
Kaṣṭajanmaṅgaḷa kaḍegoḍḍirpātanē vīramāhēśvaranu nōḍā.
Adentendoḍe:
Parastrīyaṁ parārthaṁ ca varjayēt bhāvaśud'dhimān |
liṅganiṣṭhāniyuktātmā māhēśvaramahāsthalaṁ ||''
endudāgi, intappa parama māhēśvarana śrīpādakke
namō namō embenayya akhaṇḍēśvarā.