Index   ವಚನ - 210    Search  
 
ನೈಷ್ಠಿಕಭಾವ ನಂಬುಗೆ ಇಲ್ಲದ ಬಳಿಕ, ಎಷ್ಟು ಓದಿದಡೇನು? ಎಷ್ಟು ಕೇಳಿದಡೇನು? ಎಷ್ಟು ಪೂಜೆಯ ಮಾಡಿದಡೇನು? ಅದು ನಷ್ಟವಲ್ಲದೆ ದೃಷ್ಟಕ್ಕೆ ಸಂಧಾನವಲ್ಲ ನೋಡಾ. ಇದು ಕಾರಣ, ನೈಷ್ಠೆ ಬಲಿದು ಭಾವತುಂಬಿ ನಂಬುಗೆ ಇಂಬುಗೊಂಡು ಮಾಡುವುದೆ ದೇವರಪೂಜೆ. ಅದೇ ನಮ್ಮ ಅಖಂಡೇಶ್ವರಲಿಂಗದ ಒಲುಮೆ.