Index   ವಚನ - 234    Search  
 
ಕಾಯವ ದಂಡಿಸಿ, ಕಂಡ ಕಂಡ ಕ್ಷೇತ್ರಂಗಳಿಗೆ ಹೋಗಿ ತೊಳಲಿ ಬಳಲಿದಡಿಲ್ಲ. ಜಪತಪ ಹೋಮ ನೇಮ ನಿತ್ಯಂಗಳ ಮಾಡಿದಡಿಲ್ಲ. ಅಶನ ವಸನ ವಿಷಯ ವಿಕಾರಂಗಳ ತೊರೆದಡಿಲ್ಲ. ಅಖಂಡೇಶ್ವರಾ, ನೀವು ಒಲಿದು ಸಲಹದನ್ನಕ್ಕರ ಏನು ಮಾಡಿದಡೇನು ಫಲವಿಲ್ಲವಯ್ಯ.