Index   ವಚನ - 237    Search  
 
ನೋಡಬಾರದು ಪರಸತಿಯರ. ಮಾಡಬಾರದು ಸುಗುಣವಿಲ್ಲದವರಿಗುಪಚಾರವ. ಬೇಡಬಾರದು ಸದ್ಭಕ್ತರಲ್ಲದವರ. ಹಾಡಬಾರದು ಶಿವನಲ್ಲದೆ ಅನ್ಯದೈವಂಗಳ. ಅದೇನು ಕಾರಣವೆಂದೊಡೆ: ಮುಂದೆ ಭವಬಂಧನದ ತೊಡಕು ಉಂಟಾದ ಕಾರಣ. ಅಖಂಡೇಶ್ವರಾ, ನಿಮ್ಮನಲ್ಲದೆ ಅನ್ಯವನರಿಯದಂತೆ ಮಾಡು ಎನ್ನ ನಿಮ್ಮ ನಾ ಬೇಡಿಕೊಂಬೆನು.