Index   ವಚನ - 238    Search  
 
ನೋಟ ಭಂಗ ಪರಸತಿಯರ. ಬೇಟ ಭಂಗ ಪರಸತಿಯರ. ಕೂಟ ಭಂಗ ಪರಸತಿಯರ. ಅದೇನು ಕಾರಣವೆಂದೊಡೆ: ಮುನ್ನ ಅರಿಯದೆ ಕೆಟ್ಟರು ಕೀಚಕ ರಾವಣ ದೇವೇಂದ್ರರು. ಇನ್ನು ಬಯಸುವವರಿಗೆ ಅದೇ ವಿಧಿ ನೋಡಾ ಅಖಂಡೇಶ್ವರಾ.