ಅನಂತಕೋಟಿ ಹೀನ ಭವಿಜನ್ಮವ ನೀಗಿ ಶಿವಜನ್ಮಕ್ಕೆ ಬಂದು,
ಶ್ರೀಗುರುಕಾರುಣ್ಯವ ಪಡೆದು ಪರಮ ಪವಿತ್ರಕಾಯನೆನಿಸಿ,
ಶಿವಭಕ್ತನಾದ ಬಳಿಕ ಮರಳಿ ಭವಿಸಂಗವ ಮಾಡಲಾಗದು.
ಅದೇನು ಕಾರಣವೆಂದೊಡೆ:
ಹಿಂದಣ ಕ್ರಿಮಿ ಕೀಟಕ ಸುನಿ ಸೂಕರಜನ್ಮ ಬಪ್ಪುದಾಗಿ
ಮುಂದೆ ಎಚ್ಚರದಲ್ಲಿ ನಡೆಯಬೇಕು.
ಎಚ್ಚರದಪ್ಪಿ ಅರುಹುಮರಹಿನಿಂದ
ಭವಿಸಂಗವ ಮಾಡುವ ಭಕ್ತನ ವಿಧಿ ಎಂತಾಯಿತ್ತೆಂದಡೆ:
ದೇವರಿಗೆಂದು ನೇಮಿಸಿ ಮಾಡಿದ ಮೀಸಲೋಗರವ
ಶ್ವಾನ ಮುಟ್ಟಿದಂತಾಯಿತ್ತಯ್ಯ ಅಖಂಡೇಶ್ವರಾ.
Art
Manuscript
Music
Courtesy:
Transliteration
Anantakōṭi hīna bhavijanmava nīgi śivajanmakke bandu,
śrīgurukāruṇyava paḍedu parama pavitrakāyanenisi,
śivabhaktanāda baḷika maraḷi bhavisaṅgava māḍalāgadu.
Adēnu kāraṇavendoḍe:
Hindaṇa krimi kīṭaka suni sūkarajanma bappudāgi
munde eccaradalli naḍeyabēku.
Eccaradappi aruhumarahininda
bhavisaṅgava māḍuva bhaktana vidhi entāyittendaḍe:
Dēvarigendu nēmisi māḍida mīsalōgarava
śvāna muṭṭidantāyittayya akhaṇḍēśvarā.