Index   ವಚನ - 299    Search  
 
ಮಾಡಲಾಗದು ಭವಿಯ ಸಂಪರ್ಕವ. ನೋಡಲಾಗದು ಭವಿಯ ದೃಷ್ಟಿಪೂರಿತವಾಗಿ ನಡಯಲಾಗದು ಭವಿಯಸಂಗಡ ಬಟ್ಟೆಯ. ಕುಳ್ಳಿರಲಾಗದು ಭವಿಯಸಹಿತ ಗರ್ದುಗೆಯ ಮೇಲೆ. ಶಯನವ ಮಾಡಲಾಗದು ಭವಿಯಿರ್ದ ಹಾಸಿಗೆಯಲ್ಲಿ, ಭೋಜನವ ಮಾಡಲಾಗದು ಭವಿಯು ಕಾಣುವಂತೆ. ಅದೆಂತೆಂದೊಡೆ: ಆಸನೇ ಶಯನೇ ಯಾನೇ ಸಂಪರ್ಕೇ ಸಹಭೋಜನೇ | ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಮ್ ||” ಎಂದುದಾಗಿ, ಇಂತಪ್ಪ ಭವಿಯ ಸಮ್ಮಿಶ್ರವ ಮಾಡಿದ ಭಕ್ತನು ಚಂದ್ರಸೂರ್ಯರುಳ್ಳ ಪರ್ಯಂತರವಾಗಿ ಮಹಾಘೋರ ನರಕದ ಕುಳಿಯಲ್ಲಿ ಬಿದ್ದು ಮುಳುಗುತ್ತೇಳುತ್ತ ತಡಿಯ ಸೇರಲರಿಯದೆ ಬಾಧೆಪಡುತ್ತಿರ್ಪನಯ್ಯ ಅಖಂಡೇಶ್ವರಾ.