Index   ವಚನ - 315    Search  
 
ಕಟ್ಟಿದ ಬುತ್ತಿ ಎಷ್ಟು ದಿನ ಈಡೇರಲಾಪುದು. ಬಿರಿದ ಕೊಡದಲ್ಲಿ ಅಮೃತವ ತುಂಬಿದರೆ ಎಷ್ಟು ಹೊತ್ತು ಇರಲಾಪುದು. ಖ್ಯಾತಿಯ ಭಕ್ತಿ, ಕಲಿಕೆಯ ವಿರಕ್ತಿ ಅದರಂತೆ ಕಂಡಯ್ಯ. ಸದ್ಗುರುನಾಥ ಉದ್ಯೋಗಿಸಿ ಕೊಟ್ಟುದು ನಿಜವಲ್ಲದೆ ಉಳಿದುದೆಲ್ಲ ಅಬದ್ದವೆಂಬೆನಯ್ಯ ಅಖಂಡೇಶ್ವರಾ.