Index   ವಚನ - 316    Search  
 
ಒಲ್ಲನು ಒಲ್ಲನಯ್ಯ ಶಿವಭಕ್ತಿ ಇಲ್ಲದವರ. ಒಲ್ಲನು ಒಲ್ಲನಯ್ಯ ಶಿವಜ್ಞಾನ ಇಲ್ಲದವರ. ಒಲ್ಲನು ಒಲ್ಲನಯ್ಯ ಶಿವಭಾವ ಇಲ್ಲದವರ. ಒಲ್ಲನು ಒಲ್ಲನಯ್ಯ ಶಿವಚಿಂತನೆ ಇಲ್ಲದವರ. ಒಲ್ಲನು ಒಲ್ಲನಯ್ಯ ನಮ್ಮ ಅಖಂಡೇಶ್ವರನು ಶಿವಾಚಾರವಿಲ್ಲದ ಭವಪಾತಕರ.