Index   ವಚನ - 317    Search  
 
ಎಚ್ಚರವಿರಬೇಕು ನಡೆನುಡಿಯಲ್ಲಿ, ಮಚ್ಚರವಿರಬೇಕು ಭವಸಂಸಾರದಲ್ಲಿ, ಹುಚ್ಚನಾಗಿರಬೇಕು ಜನರ ಕಣ್ಣಿನಲ್ಲಿ, ಮನ ಅಚ್ಚೊತ್ತಿದಂತಿರಬೇಕು ಲಿಂಗದಲ್ಲಿ, ಇಂತೀ ಗುಣವುಳ್ಳಾತನೇ ಅಚ್ಚ ಶರಣನು ನೋಡಾ ಅಖಂಡೇಶ್ವರಾ.