ಜೀವಭಾವದಿಂದೆ ಜೀವನ ತಿಂದು
ಜೀವಿಸಿ ಜನನ ಮರಣಂಗಳಿಂದ
ದುಃಖಬಡುತಿರ್ಪುವು ನೋಡಾ ಸಕಲ ಪ್ರಾಣಿಗಳು.
ಅದೆಂತೆಂದೊಡೆ:
ಪೃಥ್ವಿಬೀಜಂ ತಥಾ ಮಾಂಸಂ ಅಪ್ದ್ರವ್ಯಂ ಸುರಾಮಯಂ |
ಆತ್ಮ ಜೀವಸಮಾಯುಕ್ತಃ ಜೀವಃ ಜೀವೇನ ಭಕ್ಷ್ಯತೇ ||''
ಎಂದುದಾಗಿ,
ಇಂತಪ್ಪ ಜೀವಮಯವಾದ ಪದಾರ್ಥವನು
ಶುದ್ಧಸಂಸ್ಕಾರವ ಮಾಡಿ,
ಲಿಂಗಜಂಗಮದ ಮುಖದಲ್ಲಿ ಸಮರ್ಪಿಸಿ,
ಲಿಂಗಜಂಗಮದ ಮುಖದಲ್ಲಿ ಒದಗಿದ
ಪರಮಪ್ರಸಾದವನು ಭೋಗಿಸುವ ಸದ್ ಭಕ್ತಂಗೆ
ಜನನಮರಣಂಗಳು ದೂರವಾಗಿರ್ಪುವಯ್ಯಾ
ಅಖಂಡೇಶ್ವರಾ.
Art
Manuscript
Music
Courtesy:
Transliteration
Jīvabhāvadinde jīvana tindu
jīvisi janana maraṇaṅgaḷinda
duḥkhabaḍutirpuvu nōḍā sakala prāṇigaḷu.
Adentendoḍe:
Pr̥thvibījaṁ tathā mānsaṁ apdravyaṁ surāmayaṁ |
ātma jīvasamāyuktaḥ jīvaḥ jīvēna bhakṣyatē ||''
endudāgi,
intappa jīvamayavāda padārthavanu
śud'dhasanskārava māḍi,
liṅgajaṅgamada mukhadalli samarpisi,
Liṅgajaṅgamada mukhadalli odagida
paramaprasādavanu bhōgisuva sad bhaktaṅge
jananamaraṇaṅgaḷu dūravāgirpuvayyā
akhaṇḍēśvarā.