ಪರಿಪಾಕವಾದ ಸಕಲಪದಾರ್ಥಂಗಳ ಹಸ್ತಪರುಷದಿಂದ
ಶುದ್ಧಸಂಸ್ಕಾರವ ಮಾಡಿದಲ್ಲದೆ ಲಿಂಗಕ್ಕೆ ಅರ್ಪಿಸಲಾಗದು.
ಅದೇನು ಕಾರಣವೆಂದಡೆ:
ಹಸ್ತಪರುಷವಿಲ್ಲದ ಪದಾರ್ಥ ಉಚ್ಛಿಷ್ಟವೆನಿಸಿತ್ತು.
ಹಸ್ತಪರುಷವಿಲ್ಲದ ಪದಾರ್ಥ ಪಂಚಭೂತ ಪ್ರಕೃತ ಜೀವಮಯವೆನಿಸಿತ್ತು.
ಹಸ್ತಪರುಷವಿಲ್ಲದ ಪದಾರ್ಥ ಜೀರ್ಣಗೋಮಾಂಸವೆನಿಸಿತ್ತು
ಹಸ್ತಪರುಷವಿಲ್ಲದ ಪದಾರ್ಥ ಅಶುದ್ಧ ಕಿಲ್ಬಿಷವೆನಿಸಿತ್ತು.
ಅದೆಂತೆಂದೊಡೆ:
ಜಂಗಮಸ್ಯ ಕರಸ್ಪರ್ಶಾತ್ ಸರ್ವದ್ರವ್ಯಂ ಚ ಶುದ್ಧ್ಯತೇ |
ಹಸ್ತಸ್ಪರ್ಶಂ ವಿನಾ ಪಾಕಂ ಕಿಲ್ಬಿಷಂ ಪ್ರೋಚ್ಯತೇ ಬುಧೈಃ ||''
ಎಂದುದಾಗಿ, ಇಂತಪ್ಪ ಪದಾರ್ಥದ ಪೂರ್ವಾಶ್ರಯವನು
ಶಿವಮಂತ್ರ ಶ್ರೀ ವಿಭೂತಿಯಿಂದೆ ಕಳೆದು,
ಶುದ್ಧಸಂಸ್ಕಾರವೆನಿಸಿ ಶಿವನೇತ್ರದಿಂದೆ ನೋಡಿ, ಶಿವಹಸ್ತದಿಂದ ಮುಟ್ಟಿ,
ಶಿವಲಿಂಗಕ್ಕೆ ಅರ್ಪಿಸಿದಲ್ಲಿ ಶಿವಪ್ರಸಾದವೆನಿಸಿತ್ತು
ಆ ಶಿವಪ್ರಸಾದವನು ಶಿವಲಿಂಗಸನ್ನಿಹಿತನಾಗಿ
ಶಿವಜಿಹ್ವೆಯಲ್ಲಿ ಭೋಗಿಸುವಾತನೆ ಶಿವಶರಣನು.
ಆತನೆ ಶಿವಪ್ರಸಾದಿ, ಆತನೆ ಶಿವಾನುಭಾವಿ.
ಇಂತಪ್ಪ ಭೇದವನರಿಯದೆ ಮಾಡುವ ಮಾಟವೆಲ್ಲವು
ಜೀವಗಡಣದೊಳಗಯ್ಯಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Paripākavāda sakalapadārthaṅgaḷa hastaparuṣadinda
śud'dhasanskārava māḍidallade liṅgakke arpisalāgadu.
Adēnu kāraṇavendaḍe:
Hastaparuṣavillada padārtha ucchiṣṭavenisittu.
Hastaparuṣavillada padārtha pan̄cabhūta prakr̥ta jīvamayavenisittu.
Hastaparuṣavillada padārtha jīrṇagōmānsavenisittu
hastaparuṣavillada padārtha aśud'dha kilbiṣavenisittu.
Adentendoḍe:
Jaṅgamasya karasparśāt sarvadravyaṁ ca śud'dhyatē |
Hastasparśaṁ vinā pākaṁ kilbiṣaṁ prōcyatē budhaiḥ ||''
endudāgi, intappa padārthada pūrvāśrayavanu
śivamantra śrī vibhūtiyinde kaḷedu,
śud'dhasanskāravenisi śivanētradinde nōḍi, śivahastadinda muṭṭi,
śivaliṅgakke arpisidalli śivaprasādavenisittu
ā śivaprasādavanu śivaliṅgasannihitanāgi
śivajihveyalli bhōgisuvātane śivaśaraṇanu.
Ātane śivaprasādi, ātane śivānubhāvi.
Intappa bhēdavanariyade māḍuva māṭavellavu
jīvagaḍaṇadoḷagayyā akhaṇḍēśvarā.