Index   ವಚನ - 395    Search  
 
ಶಿವಂಗೆ ಐದುಮುಖವಿರ್ಪುದ ಸಕಲರು ಬಲ್ಲರು. ಭಕ್ತಂಗೆ ಐದುಮುಖವಿರ್ಪುದನಾರೂ ಅರಿಯರಲ್ಲ. ಆ ಭಕ್ತಂಗೆ ಗುರು ಒಂದು ಮುಖ, ಲಿಂಗ ಒಂದು ಮುಖ, ಜಂಗಮ ಒಂದು ಮುಖ, ಪಾದೋದಕ ಒಂದು ಮುಖ, ಪ್ರಸಾದ ಒಂದು ಮುಖ. ಇಂತೀ ಪಂಚಮುಖವನುಳ್ಳ ಸದ್ಭಕ್ತನೇ ಸಾಕ್ಷಾತ್ ಪರಶಿವನು ತಾನೆ ನೋಡಾ ಅಖಂಡೇಶ್ವರಾ.