ಕಾಯವಿಲ್ಲದ ಪುರುಷನು ಕಸವಿಲ್ಲದ ಭೂಮಿಯಲ್ಲಿ
ಕಾಮಿತವಿಲ್ಲದ ಬೀಜವ ಬಿತ್ತಲು
ಅದು ಅಂಕುರಿಸಿ ಎಲೆ ಎರಡಾಯಿತ್ತು;
ಶಾಖೆ ಮೂರಾಯಿತ್ತು; ತಳಿರು ಆರಾಯಿತ್ತು;
ಕುಸುಮ ಮೂವತ್ತಾರಾಯಿತ್ತು;
ಕಾಯಿ ಇನ್ನೂರಹದಿನಾರಾಯಿತ್ತು;
ಹಣ್ಣು ವಿಶ್ವಪರಿಪೂರ್ಣವಾಯಿತ್ತು.
ಅದು ಅಖಂಡ ರಸತುಂಬಿ ಬಟ್ಟಬಯಲಲ್ಲಿ ತೊಟ್ಟುಬಿಟ್ಟಿತ್ತು
ಆ ಹಣ್ಣ ನಾನು ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಮುಟ್ಟಿ,
ಬಾಯಿಲ್ಲದೆ ಸವಿದು, ಮನವಿಲ್ಲದೆ ಪರಿಣಾಮಿಸಿದೆನಾಗಿ,
ಅಖಂಡೇಶ್ವರನು ತನ್ನೊಳಗೆ ಇಂಬಿಟ್ಟುಕೊಂಡನು.
Art
Manuscript
Music
Courtesy:
Transliteration
Kāyavillada puruṣanu kasavillada bhūmiyalli
kāmitavillada bījava bittalu
adu aṅkurisi ele eraḍāyittu;
śākhe mūrāyittu; taḷiru ārāyittu;
kusuma mūvattārāyittu;
kāyi innūrahadinārāyittu;
haṇṇu viśvaparipūrṇavāyittu.
Adu akhaṇḍa rasatumbi baṭṭabayalalli toṭṭubiṭṭittu
ā haṇṇa nānu kaṇṇillade nōḍi, kaiyillade muṭṭi,
bāyillade savidu, manavillade pariṇāmisidenāgi,
akhaṇḍēśvaranu tannoḷage imbiṭṭukoṇḍanu.