Index   ವಚನ - 434    Search  
 
ಪಂಚಪ್ರಾಣವಾಯುಗಳ ಸಂಚಲಗುಣವನಳಿದಿರಬೇಕು. ಮುಂಚುವ ಕರಣಂಗಳ ವಂಚನೆಯನತಿಗಳೆದಿರಬೇಕು. ಚಿತ್ತವು ಲಿಂಗದಲ್ಲಿ ಅಚ್ಚೊತ್ತಿದಂತಿರಬೇಕು. ಪ್ರಾಣ ಲಿಂಗದಲ್ಲಿ ಕೂಡಿ, ಲಿಂಗ ಪ್ರಾಣದಲ್ಲಿ ಕೂಡಿ, ಭಿನ್ನವಿಲ್ಲದೆ ಏಕಸಮರಸವಾಗಿರಬೇಕು. ಸುಖದುಃಖ ನಾಸ್ತಿಯಾಗಿರಬೇಕು. ಇಷ್ಟುಳ್ಳಾತನೆ ಪ್ರಾಣಲಿಂಗಿ. ಅದೆಂತೆಂದೊಡೆ: ವಾಯುಪ್ರಾಣಗುಣೇ ಲಿಂಗೇ ಲಿಂಗಪ್ರಾಣೇ ಸಮಾಹಿತಃ| ಸುಖದುಃಖಭಯಮ್ ನಾಸ್ತಿ ಪ್ರಾಣಲಿಂಗಿಸ್ಥಲಂ ಭವೇತ್ || '' ಎಂದುದಾಗಿ, ಇಂತಪ್ಪ ಪ್ರಾಣಲಿಂಗಿಗಳ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.