Index   ವಚನ - 435    Search  
 
ಪ್ರಾಣಲಿಂಗ ಪ್ರಾಣಲಿಂಗವೆಂದು ಪ್ರಾಣಲಿಂಗನ ನುಡಿಗಡಣವ ಕಲಿತು ನುಡಿವರೆಲ್ಲ ಪ್ರಾಣಲಿಂಗದ ನೆಲೆಯನರಿಯರು; ಪ್ರಾಣಲಿಂಗದ ನಿಲವನರಿಯರು; ಪ್ರಾಣಲಿಂಗದ ಹೊಲಬನರಿಯರು; ಪ್ರಾಣಲಿಂಗದ ಸ್ಥಲವನರಿಯರು; ಪ್ರಾಣಲಿಂಗದ ಬೆಳಗನರಿಯರು; ಪ್ರಾಣಲಿಂಗದ ಕಳೆಯನರಿಯರು; ಪ್ರಾಣಲಿಂಗದ ಘನವನರಿಯರು; ಪ್ರಾಣಲಿಂಗದ ಘನವ ಅನಾದಿ ಸಂಸಿದ್ಧವಾದ ನಿಮ್ಮ ಪ್ರಾಣಲಿಂಗಿಯೆ ಬಲ್ಲನಲ್ಲದೆ ಉಳಿದ ಪ್ರಪಂಚದೇಹಿಗಳೆತ್ತ ಬಲ್ಲರಯ್ಯಾ ಅಖಂಡೇಶ್ವರಾ.