Index   ವಚನ - 436    Search  
 
ಕ್ಷೀರದ ರುಚಿಯ ಹಂಸಬಲ್ಲುದಲ್ಲದೆ, ನೀರೊಳಗಿರ್ಪ ನೀರಗೋಳಿ ಎತ್ತ ಬಲ್ಲುದಯ್ಯಾ? ಕಬ್ಬಿನ ಸ್ವಾದವ ಮದಗಜಬಲ್ಲುದಲ್ಲದೆ, ಸೋಗೆಯ ತಿಂಬ ಕುರಿ ಎತ್ತಬಲ್ಲುದಯ್ಯಾ? ಪುಷ್ಪದ ಪರಿಮಳವ ಭೃಂಗಬಲ್ಲುದಲ್ಲದೆ, ಮರಕಡಿಯುವ ಗುಂಗೆಯಹುಳ ಎತ್ತ ಬಲ್ಲುದಯ್ಯಾ? ಆದಿಸ್ಥಳಕುಳದ ನಿರ್ಣಯವ ಅನಾದಿಶರಣ ಬಲ್ಲನಲ್ಲದೆ ಈ ಲೋಕದ ಗಾದೆಯಮನುಜರು ಎತ್ತ ಬಲ್ಲರಯ್ಯಾ ಅಖಂಡೇಶ್ವರಾ?