Index   ವಚನ - 450    Search  
 
ಸರ್ವಜ್ಞನು ನೀನೇ ಅಯ್ಯಾ. ಸರ್ವೇಶ್ವರನು ನೀನೇ ಅಯ್ಯಾ. ಸರ್ವಾಂತರ್ಯಾಮಿ ನೀನೇ ಅಯ್ಯಾ. ಸರ್ವಗತನು ನೀನೇ ಅಯ್ಯಾ. ಸರ್ವಕಳಾಭರಿತನು ನೀನೇ ಅಯ್ಯಾ. ಸರ್ವಗುಣಸಂಪನ್ನನು ನೀನೇ ಅಯ್ಯಾ ಅಖಂಡೇಶ್ವರಾ.