Index   ವಚನ - 451    Search  
 
ಕುಂಭಸಹಸ್ರ ಉದಕದೊಳಗೆ ಬಿಂಬಿಸಿ ತೋರುವ ಸೂರ್ಯನೊಬ್ಬನಲ್ಲದೆ, ಮತ್ತೆ ಹಲಬರುಂಟೆ ಅಯ್ಯಾ? ಸಕಲ ದೇಹದೊಳಗೆ ಸಂಭ್ರಮಿಸಿ ತುಂಬಿರ್ಪ ಪರವಸ್ತು ನೀನೊಬ್ಬನಲ್ಲದೆ, ಮತ್ತಾರನು ಕಾಣೆನಯ್ಯಾ ಅಖಂಡೇಶ್ವರಾ.