Index   ವಚನ - 462    Search  
 
ಆನೆಗಳೆಂಟನು ಒಂದು ಮೌನದ ಚಿಕ್ಕಾಡು ನುಂಗಿತ್ತು. ಕಾನನದೆರಳೆಯ ಕಪ್ಪೆ ನುಂಗಿತ್ತು. ಮಾನಿನಿಯ ಮಸ್ತಕದಲ್ಲಿ ಭಾನುಶತಕೋಟಿ ತೇಜದ ಕಳೆ ಮೊಳೆದೋರಿತ್ತು. ಇದೇನು ಸೋಜಿಗ ಹೇಳಾ ಅಖಂಡೇಶ್ವರಾ?