Index   ವಚನ - 473    Search  
 
ಚಂದ್ರಶಿಲೆಯ ಮಂಟಪದೊಳಗೆ ಇಂದುಧರನ ಪೂಜೆಯ ವಿಸ್ತಾರವ ನೋಡಾ! ಬಂದು ನೆರೆದಿರ್ಪರು ಸಕಲ ಗಣಂಗಳು. ಚಂದ್ರಜ್ಯೋತಿಯ ಸಾಲುಸಾಲಿನ ಸೊಬಗು ನೋಡಾ! ಅಲ್ಲಿ ಚಂದಚಂದದ ದುಂದುಭಿನಾದ ಮೊಳಗುತಿರ್ಪುದು. ಇದರಂದವನೇನ ಹೇಳುವೆನಯ್ಯಾ ಅಖಂಡೇಶ್ವರಾ!