Index   ವಚನ - 474    Search  
 
ಸಾಸಿರ ಕಂಬದ ಮಂಟಪದೊಳಗೆ ಈಶ್ವರನ ಓಲಗದ ಸೋಜಿಗವನೇನ ಹೇಳುವೆನಯ್ಯಾ! ಮೂಜಗದವರೆಲ್ಲ ಮೈಮರೆದಿರ್ಪರು. ಭಾಸ್ಕರಕೋಟಿ ಬೆಳಗು ಕಂಗಳ ತುಂಬಿತ್ತು ನೋಡಾ ಅಖಂಡೇಶ್ವರಾ.