Index   ವಚನ - 519    Search  
 
ಎನ್ನ ಸ್ಥೂಲತನುವೆಂಬ ಕೈಲಾಸದ ಮೇಲೆ ಕಂಗಳ ಮಂಟಪದಲ್ಲಿ ಕುಳ್ಳಿರ್ದು ದೃಶ್ಯಾದೃಶ್ಯದ ಲೀಲೆಯನಾಡುವಾತ ನೀನೇ ಅಯ್ಯಾ. ಎನ್ನ ಸೂಕ್ಷ್ಮತನುವೆಂಬ ಕೈಲಾಸದ ಮೇಲೆ ಮನೋಮಂಟಪದಲ್ಲಿ ಕುಳ್ಳಿರ್ದು ದೃಶ್ಯಾದೃಶ್ಯದ ಲೀಲೆಯನಾಡುವಾತನು ನೀನೇ ಅಯ್ಯಾ. ಎನ್ನ ಕಾರಣತನುವೆಂಬ ಕೈಲಾಸದ ಮೇಲೆ ಭಾವಮಂಟಪದಲ್ಲಿ ಕುಳ್ಳಿರ್ದು ಕೇವಲ ಅದೃಶ್ಯಲೀಲೆಯನಾಡುವಾತನು ನೀನೆ ಅಯ್ಯಾ. ಎನ್ನ ಮಹಾಕಾರಣತನುವೆಂಬ ಕೈಲಾಸದ ಮೇಲೆ ಮಹಾಜ್ಞಾನಮಂಟಪದಲ್ಲಿ ಕುಳ್ಳಿರ್ದು ಅಖಂಡಪರಿಪೂರ್ಣ ನಿರವಯಲೀಲೆಯನಾಡುವಾತನು ನೀನೇ ಅಯ್ಯಾ ಅಖಂಡೇಶ್ವರಾ.