Index   ವಚನ - 551    Search  
 
ಗೋಸುಂಬೆ ಹುಳದಂತೆ ಬಹುವೇಷಧಾರಿಯಲ್ಲ ಶರಣ. ಇಂದ್ರಧನುವಿನಂತೆ ಚಂದದ ಬಣ್ಣಕ್ಕೆ ಮೋಹಿಯಲ್ಲ ಶರಣ. ಹಿಂದುಮುಂದಣ ನೆನೆವ ಹಾರುವನಲ್ಲ ಶರಣ. ಆನಂದಭರಿತ ಶರಣನ ಏನೆಂದುಪಮಿಸಬಹುದಯ್ಯಾ ಅಖಂಡೇಶ್ವರಾ.