Index   ವಚನ - 553    Search  
 
ಸತ್ಯಸದಾಚಾರಿಯಯ್ಯಾ ನಿಮ್ಮ ಶರಣ. ನಿತ್ಯನಿರುಪಮನಯ್ಯಾ ನಿಮ್ಮ ಶರಣ. ಭಕ್ತಿಭಾವಕನಯ್ಯಾ ನಿಮ್ಮ ಶರಣ. ಯುಕ್ತಿವಿಚಾರನಯ್ಯಾ ನಿಮ್ಮ ಶರಣ. ಮುಕ್ತಿಮೂಲಿಗನಯ್ಯಾ ನಿಮ್ಮ ಶರಣ. ಅಖಂಡೇಶ್ವರಾ, ನಿಮ್ಮ ಶರಣನ ಘನವ ನೀವೇ ಬಲ್ಲಿರಲ್ಲದೆ ಲೋಕದ ಕುನ್ನಿಮಾನವರೆತ್ತ ಬಲ್ಲರಯ್ಯಾ.