Index   ವಚನ - 647    Search  
 
ಅರಿದಲ್ಲಿ ಶರಣ ಮರೆದಲ್ಲಿ ಮಾನವನೆಂದು ನುಡಿವ ಅಜ್ಞಾನಿಗಳ ಮಾತ ಕೇಳಲಾಗದು. ಅದೇನು ಕಾರಣವೆಂದೊಡೆ: ಜಗದಗಲದ ಗುರಿಯ ಹೂಡಿ ಮುಗಿಲಗಲದ ಬಾಣವನೆಸೆದಡೆ ತಪ್ಪಿ ಕಡೆಗೆ ಬೀಳುವ ಸ್ಥಾನವುಂಟೆ? ಒಳಹೊರಗೆ ಸರ್ವಾಂಗಲಿಂಗವಾದ ಶರಣನಲ್ಲಿ ಅರುಹುಮರಹುಗಳು ತೋರಲೆಡೆಯುಂಟೆ? ಇದು ಕಾರಣ, ನಮ್ಮ ಅಖಂಡೇಶ್ವರನ ಶರಣನಲ್ಲಿ ತೋರುವ ತೋರಿಕೆಯೆಲ್ಲ ಲಿಂಗವು ತಾನೆ ಕಾಣಿರೊ.