ಅನಂತಕೋಟಿ ಬ್ರಹ್ಮಾಂಡಗಳನೊಳಕೊಂಡ
ಮಹಾಘನಲಿಂಗದಲ್ಲಿ
ತನ್ನ ಅಂಗ ಮನ ಪ್ರಾಣೇಂದ್ರಿಯ
ವಿಷಯ ಕರಣಂಗಳ ಹೂಳಿ,
ತಾನಿಲ್ಲದೆ ನಡೆವುತ್ತೆ, ತಾನಿಲ್ಲದೆ ನುಡಿವುತ್ತೆ,
ತಾನಿಲ್ಲದೆ ಹಿಡಿವುತ್ತೆ, ತಾನಿಲ್ಲದೆ ಬಿಡುತ್ತೆ,
ತಾನಿಲ್ಲದೆ ನೋಡುತ್ತೆ, ತಾನಿಲ್ಲದೆ ಆಡುತ್ತೆ
ಬಯಲ ಬೊಂಬೆಯಂತೆ ಸುಳಿವ
ಮಹಾಶರಣರ ತೋರಿಸಿ
ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.
Art
Manuscript
Music
Courtesy:
Transliteration
Anantakōṭi brahmāṇḍagaḷanoḷakoṇḍa
mahāghanaliṅgadalli
tanna aṅga mana prāṇēndriya
viṣaya karaṇaṅgaḷa hūḷi,
tānillade naḍevutte, tānillade nuḍivutte,
tānillade hiḍivutte, tānillade biḍutte,
tānillade nōḍutte, tānillade āḍutte
bayala bombeyante suḷiva
mahāśaraṇara tōrisi
badukisayyā enna akhaṇḍēśvarā.