Index   ವಚನ - 648    Search  
 
ಅನಂತಕೋಟಿ ಬ್ರಹ್ಮಾಂಡಗಳನೊಳಕೊಂಡ ಮಹಾಘನಲಿಂಗದಲ್ಲಿ ತನ್ನ ಅಂಗ ಮನ ಪ್ರಾಣೇಂದ್ರಿಯ ವಿಷಯ ಕರಣಂಗಳ ಹೂಳಿ, ತಾನಿಲ್ಲದೆ ನಡೆವುತ್ತೆ, ತಾನಿಲ್ಲದೆ ನುಡಿವುತ್ತೆ, ತಾನಿಲ್ಲದೆ ಹಿಡಿವುತ್ತೆ, ತಾನಿಲ್ಲದೆ ಬಿಡುತ್ತೆ, ತಾನಿಲ್ಲದೆ ನೋಡುತ್ತೆ, ತಾನಿಲ್ಲದೆ ಆಡುತ್ತೆ ಬಯಲ ಬೊಂಬೆಯಂತೆ ಸುಳಿವ ಮಹಾಶರಣರ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.