ಎನ್ನ ತನುವಿನೊಳಗೆ ತನುರೂಪಾಗಿರ್ದಿರಯ್ಯಾ ನೀವು.
ಎನ್ನ ಮನದೊಳಗೆ ಮನರೂಪಾಗಿರ್ದಿರಯ್ಯಾ ನೀವು.
ಎನ್ನ ಪ್ರಾಣದೊಳಗೆ ಪ್ರಾಣರೂಪಾಗಿರ್ದಿರಯ್ಯಾ ನೀವು.
ಎನ್ನ ಭಾವದೊಳಗೆ ಭಾವರೂಪಾಗಿರ್ದಿರಯ್ಯಾ ನೀವು.
ಎನ್ನ ಇಂದ್ರಿಯಂಗಳೊಳಗೆ ಇಂದ್ರಿಯಂಗಳ
ರೂಪಾಗಿರ್ದಿರಯ್ಯಾ ನೀವು.
ಎನ್ನ ವಿಷಯಂಗಳೊಳಗೆ
ವಿಷಯಂಗಳ ರೂಪಾಗಿರ್ದಿರಯ್ಯಾ ನೀವು.
ಎನ್ನ ತನು ಮನ ಪ್ರಾಣ ಭಾವ
ಇಂದ್ರಿಯಂಗಳೆಲ್ಲವು ನಿಮ್ಮವಾಗಿ
ಇಂತು ಎನ್ನೊಳಗೆ ನೀವು ಈ ಪರಿಯಲ್ಲಿರ್ದಿರಾಗಿ
ನಾ ನಿಮ್ಮೊಳಗೆ ಚಿನ್ನಬಣ್ಣದಂತೆ
ರತ್ನದೀಪ್ತಿಯಂತೆ ಜ್ಯೋತಿಪ್ರಭೆಯಂತಿರ್ದೆನಯ್ಯಾ
ಅಖಂಡೇಶ್ವರಾ.
Art
Manuscript
Music
Courtesy:
Transliteration
Enna tanuvinoḷage tanurūpāgirdirayyā nīvu.
Enna manadoḷage manarūpāgirdirayyā nīvu.
Enna prāṇadoḷage prāṇarūpāgirdirayyā nīvu.
Enna bhāvadoḷage bhāvarūpāgirdirayyā nīvu.
Enna indriyaṅgaḷoḷage indriyaṅgaḷa
rūpāgirdirayyā nīvu.
Enna viṣayaṅgaḷoḷage
viṣayaṅgaḷa rūpāgirdirayyā nīvu.
Enna tanu mana prāṇa bhāva
indriyaṅgaḷellavu nim'mavāgi
intu ennoḷage nīvu ī pariyallirdirāgi
nā nim'moḷage cinnabaṇṇadante
ratnadīptiyante jyōtiprabheyantirdenayyā
akhaṇḍēśvarā.