ಇಷ್ಟಲಿಂಗಕ್ಕೆ ತನುವೆ ಭಾಜನ.
ಪ್ರಾಣಲಿಂಗಕ್ಕೆ ಮನವೆ ಭಾಜನ.
ಭಾವಲಿಂಗಕ್ಕೆ ಜೀವವೆ ಭಾಜನವೆಂದರಿಯದ
ಮರುಳು ಮಾನವರಿಗೆ
ಭವಬಂಧನ ಪ್ರಾಪ್ತಿಯಯ್ಯಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Iṣṭaliṅgakke tanuve bhājana.
Prāṇaliṅgakke manave bhājana.
Bhāvaliṅgakke jīvave bhājanavendariyada
maruḷu mānavarige
bhavabandhana prāptiyayyā akhaṇḍēśvarā.