Index   ವಚನ - 676    Search  
 
ಎನಗೆ ನೀನೇ ಚಿದ್‍ಭಾಂಡವಯ್ಯಾ; ನಿನಗೆ ನಾನೇ ಚಿದ್‍ಭಾಂಡವಯ್ಯಾ. ಎನಗೆ ನೀನೇ ಚಿದ್‍ಭಾಜನವಯ್ಯಾ; ನಿನಗೆ ನಾನೇ ಚಿದ್‍ಭಾಜನವಯ್ಯಾ. ಎನಗೆ ನೀನೇ ಸಕಲ ದ್ರವ್ಯ ಪದಾರ್ಥವಯ್ಯಾ; ನಿನಗೆ ನಾನೇ ಸಕಲದ್ರವ್ಯ ಪದಾರ್ಥವಯ್ಯ. ನಾನು ನೀನು ಒಂದೇ ಹರಿವಾಣದಲ್ಲಿ ಸಹಭೋಜನ ಮಾಡುತಿರ್ದೆವಾಗಿ, ಅಖಂಡೇಶ್ವರಾ, ನಾನು ನೀನೆಂಬುಭಯದ ಕೀಲು ಕಳಚಿತ್ತು ನೋಡಾ.