Index   ವಚನ - 677    Search  
 
ಕೇಳು ಕೇಳಯ್ಯಾ ಕರುಣಿ, ನೀವು ಎನ್ನ ಮರ್ತ್ಯಲೋಕಕ್ಕೆ ಕಳುಹಿದಿರಾಗಿ, ನಾನು ಮರವೆಯ ತನುವ ತಾಳಿ ಅರುಹ ಮರೆತು, ಧರಣಿಯ ವ್ಯಾಪಾರದಲ್ಲಿ ದಿಕ್ಕುಗೆಟ್ಟೆನಯ್ಯಾ. ಭಕ್ತದೇಹಿಕದೇವನೆಂಬ ಶ್ರುತಿಯ ಮರೆಯಲಾಗದಯ್ಯಾ. ನಿನ್ನ ಕಂದನೆಂದು ಎನ್ನ ಕರವಿಡಿದು ತಲೆದಡಹಿ ಪೂರ್ಣಜ್ಞಾನದ ಕಣ್ಣುದೆರೆಸಯ್ಯಾ ಅಖಂಡೇಶ್ವರಾ.