Index   ವಚನ - 679    Search  
 
ಒಮ್ಮೆ ಜ್ಞಾನಿಯೆನಿಸಿ ಮತ್ತೊಮ್ಮೆ ಅಜ್ಞಾನಿಯೆನಿಸಿ ಎನ್ನನೇತಕೆ ಕಾಡುವೆ ಹೇಳಯ್ಯಾ? ಒಮ್ಮೆ ಸಂತೋಷದಲ್ಲಿರಿಸಿ ಮತ್ತೊಮ್ಮೆ ಚಿಂತೆಯಲ್ಲಿರಿಸಿ ಎನ್ನನೇತಕೆ ಕಾಡುವೆ ಹೇಳಯ್ಯಾ? ಮರ್ಕಟನಂತೆ ಎನ್ನ ಮನವ ವ್ಯಾಕುಲದಲ್ಲಿ ಹುಚ್ಚುಗೊಳಿಸಿ ಎನ್ನನೇತಕೆ ಕಾಡುವೆ ಹೇಳಯ್ಯಾ? ನಿಮಗೆ ಹೊತ್ತು ಹೋಗದೆ, ಮತ್ತೊಂದು ವ್ಯಾಪಾರವಿಲ್ಲದೆ ಎನ್ನ ಕೂಡೆ ಹದರು ಚದುರಿನಿಂದೆ ವೇಳೆಯವ ಕಳೆವರೆ ಹೇಳಾ ಅಖಂಡೇಶ್ವರಾ?