Index   ವಚನ - 678    Search  
 
ತಂದೆ ಕೇಳಯ್ಯಾ ಲಿಂಗವೆ. ನಾನು ಹಿಂದಣ ಕರ್ಮವಾಸನೆಯಿಂದೆ ಹುಟ್ಟಿದೆನೋ? ನಿನ್ನ ಚಿದಂಶಿಕನಾಗಿ ಹುಟ್ಟಿದೆನೋ? ಎನಗೆ ಈ ಉಭಯದ ಕೀಲ ತಿಳಿಯಬಾರದು. ನೀನೊಲಿದು ಕರುಣಿಸಯ್ಯಾ ಶಿವನೆ. ಎನ್ನ ಮನದ ಸಂಕಲ್ಪದ ಅನುಮಾನವ ಪರಿಹರಿಸಯ್ಯಾ ಅಖಂಡೇಶ್ವರಾ.