Index   ವಚನ - 698    Search  
 
ಹಿಂದಣ ಶಂಕೆಯ ಹರಿದು, ಮುಂದಣ ಭವವ ಮರೆದು, ಉಭಯ ಸಂದುಗಡಿದು, ಅಖಂಡಬ್ರಹ್ಮವೆ ತಾನಾದ ಶರಣಂಗೆ ಜನನವಿಲ್ಲ, ಮರಣವಿಲ್ಲ; ಕಾಲವಿಲ್ಲ, ಕಲ್ಪಿತವಿಲ್ಲ; ಸುಖವಿಲ್ಲ, ದುಃಖವಿಲ್ಲ; ಪುಣ್ಯವಿಲ್ಲ, ಪಾಪವಿಲ್ಲ; ಪ್ರಳಯ ಮಹಾಪ್ರಳಯಂಗಳು ಮುನ್ನವೇ ಇಲ್ಲ. ಇದು ಕಾರಣವಾಗಿ, ಅನಂತಕೋಟಿ ಅಜಾಂಡಂಗಳು ಅಳಿದುಹೋದಡೆಯೂ ಅಖಂಡೇಶ್ವರಾ, ನಿಮ್ಮ ಶರಣ ನಿತ್ಯನಾಗಿ ಉಳಿದಿಹನು.