ಆದಿಯಿಲ್ಲದ ಬಯಲು,
ಅನಾದಿಯಿಲ್ಲದ ಬಯಲು,
ಶೂನ್ಯವಿಲ್ಲದ ಬಯಲು,
ನಿಃಶೂನ್ಯವಿಲ್ಲದ ಬಯಲು,
ಸುರಾಳವಿಲ್ಲದ ಬಯಲು,
ನಿರಾಳವಿಲ್ಲದ ಬಯಲು,
ಸಾವಯವಿಲ್ಲದ ಬಯಲು,
ನಿರಾವಯವಿಲ್ಲದ ಬಯಲು,
ಅಖಂಡೇಶ್ವರನೆಂಬ ಬಯಲಿನ ಬಯಲು
ಮಹಾಘನ ಬಚ್ಚಬರಿಯ ಬಯಲೊಳಗೆ
ಎಚ್ಚರವಡಗಿ ನಾನೆತ್ತ ಹೋದೆನೆಂದರಿಯೆನು.
Art
Manuscript
Music
Courtesy:
Transliteration
Ādiyillada bayalu,
anādiyillada bayalu,
śūn'yavillada bayalu,
niḥśūn'yavillada bayalu,
surāḷavillada bayalu,
nirāḷavillada bayalu,
sāvayavillada bayalu,
nirāvayavillada bayalu,
akhaṇḍēśvaranemba bayalina bayalu
mahāghana baccabariya bayaloḷage
eccaravaḍagi nānetta hōdenendariyenu.