ಭಾವವಿಲ್ಲದ ಬಯಲು,
ಜೀವವಿಲ್ಲದ ಬಯಲು,
ಮನವಿಲ್ಲದ ಬಯಲು,
ಮನನವಿಲ್ಲದ ಬಯಲು,
ಅಖಂಡೇಶ್ವರನೆಂಬ ಮಹಾಬಯಲೊಳಗೆ
ನೆನಹಡಗಿ ನಿಷ್ಪತ್ತಿಯಾಗಿರ್ದೆನು.
Art
Manuscript
Music
Courtesy:
Transliteration
Bhāvavillada bayalu,
jīvavillada bayalu,
manavillada bayalu,
mananavillada bayalu,
akhaṇḍēśvaranemba mahābayaloḷage
nenahaḍagi niṣpattiyāgirdenu.