Index   ವಚನ - 109    Search  
 
ಶಬ್ದ ಸ್ಪರ್ಶ ರೂಪು ರಸ ಗಂಧ ಪಂಚೇಂದ್ರಿಯವೆಲ್ಲ ಏಕಾಕಾರಿಗಳಾಗಿ, ತಿರುಗಿ ಹರಿಯದೆ, ಏಕಾಕಾರಿಗಳಾಗಿದ್ದವು ತಮ್ಮೊಳಗೆ. ಸಕಳೇಶ್ವರದೇವರಲ್ಲಿ, ಪರಿಣಾಮಪ್ರಸಾದಪದವಿಯ ಪಡೆದನಾಗಿ, ಒಡನೆ ಹುಟ್ಟಿ, ನೀವೆಲ್ಲ ಸುಖಿಯಾದಿರಯ್ಯಾ.