Index   ವಚನ - 113    Search  
 
ಶ್ವಾನ ಮುಟ್ಟಿದ ಪಾಯಾಳು ಅಂಜನಕ್ಕೆ ಸಲುವನೆ? ಭಕ್ತಿ ಮಿಶ್ರವಾದಡೆ ಈಶ್ವರನೊಲಿವನೆ? ಅರಗು ಮಳಲು ಬೆರಸಿ ಉಕ್ಕ ಗೆಲುವಂತೆ, ನಿಮ್ಮ ಬೆರೆಸಿದವರು ಇಟ್ಟೊರಸದಿಹರೆ ಷಡುದರುಶನವ? ಸಾಗರವ ದಾಂಟುವವ ಬಸವನ ಬಾಲವ ಬಿಟ್ಟು, ಮತ್ತೊಂದಕ್ಕೆ ಹರಿದು ಕಡಲನೊಡಗೂಡುವಂತೆ, ಶಿವಲಿಂಗದೇವನ ಪೂಜಾಕ್ರಿಯೆಯ ಮರೆದೆಡೆ, ಒಡಗೂಡದಿಹನೆ, ಕರ್ಮದ ಕಡಲವ? ದಿಟಪುಟವಿಲ್ಲದ ಭಕ್ತಿಯ ಮೆಚ್ಚ, ಸಕಳೇಶ್ವರದೇವ.